ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಮಂಗಳೂರು: ವಿದ್ಯುತ್ ಸ್ಪರ್ಶಿಸಿ‌ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಸಂಭವಿಸಿದೆ. ರೆಂಕೆದಗುತ್ತು ನಿವಾಸಿ ದಿ.ಸಂಜೀವ ಎಂಬವರ ಪತ್ನಿ ಸುಂದರಿ (55), ಮೃತಪಟ್ಟವರು ಮಧ್ಯರಾತ್ರಿ ಹಟ್ಟಿಯಲ್ಲಿ ದನ, ಕರುಗಳು ಜೋರಾಗಿ ಕೂಗಿಕೊಂಡಿತ್ತು. ಹಟ್ಟಿಗೆ ತೆರಳಿದಾಗ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ಹಟ್ಟಿಯಲ್ಲಿ ವಿದ್ಯುತ್ ವೈರ್ ನಿಂದ ಕಬ್ಬಿಣದ ಕಂಬಕ್ಕೆ ವಿದ್ಯುತ್ ಹರಿದಿತ್ತು ಎನ್ನಲಾಗಿದೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಪೊಲೀಸ್ […]