ಆರ್ಥಿಕ ಸಹಾಯ ನೀಡಿ ಸಹಕರಿಸಲು ಮನವಿ
ಕುಂದಾಪುರ: ಕುಂದಾಪುರ ಹಂಗ್ಲೂರು ನಿವಾಸಿ ಅಶೋಕ್ ಅವರ ಪತ್ನಿ ಸುಮನ ಅವರು ಆಸ್ಪತ್ರೆಯೊಂದರಲ್ಲಿ ದಾಖಲಾಗಿ ನ. 19 ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅನಂತರ ಮೂತ್ರ ಪಿಂಡದ ತೀವ್ರ ತೊಂದರೆ ಯಿಂದ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿ ನ. 20ರಂದು ಲೇಪರೋಟಮ್ ಚಿಕಿತ್ಸೆಗೊಳಗಾಗಿದ್ದು, ದಿನಕ್ಕೆ ಹಲವು ಬಾರಿ ಡಯಾಲಿಸಸ್ ಗೊಳಗಾಗಬೇಕಾಗಿದೆ. ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸುಮಾರು 2 ಲಕ್ಷ ರೂ. ಹೆಚ್ಚಿನ ಖರ್ಚು ತಗುಲುತ್ತದೆ ಎಂಬುದಾಗಿ ತಜ್ಞ ವೈದ್ಯರು ಅಂದಾಜು ಮಾಡಿ ತಿಳಿಸಿದ್ದಾರೆ. ಅವರ ಪತಿ ಅಶೋಕ್ […]