ಸುಳ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ? ಪಕ್ಷದ ಕಚೇರಿಗೆ ಬೀಗ!

ಸುಳ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಸ್‌ ಅಂಗಾರಗೆ ಟಿಕೆಟ್ ನೀಡದೆ ಭಾಗೀರಥಿ ಮುರುಳ್ಯಗೆ ಟಿಕೆಟ್ ನೀಡಿದ್ದಕ್ಕೆ ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದು ಜಗಳ ನಡೆದಿತ್ತು. ಅಂದಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬಿಜೆಪಿ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಈ ವೇಳೆ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ ಮಾಡಲಾಗಿದೆ. ವೆಂಕಟ್ […]

ಸುಳ್ಯ: ಬೈಕ್- ಕಾರು ನಡುವೆ ಅಪಘಾತ; ಆಯುರ್ವೇದ ವಿದ್ಯಾರ್ಥಿ ಸಾವು

ಸುಳ್ಯ: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸುಳ್ಯದ ಪಾಲಡ್ಕ ಎಂಬಲ್ಲಿ ವರದಿಯಾಗಿದೆ. ಮೃತ ಬೈಕ್ ಸವಾರನನ್ನು ಸುಳ್ಯ ಕೆವಿಜೆ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರ ನಿವಾಸಿ ಸ್ವರೂಪ್ (22) ಎಂದು ಗುರುತಿಸಲಾಗಿದೆ. ಸ್ವರೂಪ್ ತನ್ನ ಸ್ನೇಹಿತ ಸಂಭ್ರಮ್ ಜೊತೆ ದ್ವಿಚಕ್ರವಾಹದಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದನ್ನು ಓವರ್ ಟೇಕ್ ಮಾಡುವ ಸಂದರ್ಭ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ […]

ಸುಳ್ಯ: ಡಿ.16-18 ರವರೆಗೆ ಬೃಹತ್ ಕೃಷಿ ಮೇಳ ಆಯೋಜನೆ

ಸುಳ್ಯ: ಇಲ್ಲಿನ ಚೆನ್ನಕೇಶವ ದೇವಸ್ಥಾನ ಪರಿಸರದಲ್ಲಿ ಡಿ.16,17,18 ರಂದು ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 170 ಕ್ಕೂ ಅಧಿಕ ಕೃಷಿ ಸಂಬಂಧಿ ಮಳಿಗೆಗಳು, ಪಾರಂಪರಿಕ ಗ್ರಾಮ ವೈಶಿಷ್ಟ್ಯ, ತಾರಾಲಯ, ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ಸಚಿವರು, ಸಂಸದರು ಮತ್ತು ಶಾಸಕರು ಭಾಗವಹಿಸಲಿದ್ದಾರೆ. ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ […]

ಸುಳ್ಯ: ಸ್ಕೂಟರ್-ಕಾರ್ ಡಿಕ್ಕಿ; ಅಣ್ಣ- ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆದ್ದಾರಿಯಲ್ಲಿ ಕಾರೊಂದಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಯುವಕ ಮತ್ತು ಆತನ ಸಹೋದರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸುಬ್ರಹ್ಮಣ್ಯ-ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಡಪಳ ಬಾಜಿನಡ್ಕದ ನಿಶಾಂತ್ ಹಾಗೂ ಅವರ ತಂಗಿ ಮೋಕ್ಷ ಎಂದು ಗುರುತಿಸಲಾಗಿದೆ. ನಿಶಾಂತ್ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಹೋದರಿ 5 ನೇ ತರಗತಿಯಲ್ಲಿ ಓದುತ್ತಿದ್ದಳು […]

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಲಘು ಕಂಪನದ ಅನುಭವ

ಮಂಗಳೂರು: ಮಂಗಳವಾರ ಬೆಳಗ್ಗೆ  ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಜೂನ್ 25 ರಂದು ಸಂಭವಿಸಿದ ಭೂಕಂಪನದಂತೆಯೇ, ಸುಳ್ಯ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ 7.45 ರ ಸುಮಾರಿಗೆ ಕಂಪನದ ಅನುಭವವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ನಡುಕ ನಾಲ್ಕು ಸೆಕೆಂಡುಗಳ ಕಾಲ ನಡೆಯಿತು ಎನ್ನಲಾಗಿದೆ. ಈ ಬಗ್ಗೆ ವೊಲ್ಕಾನೋ ಡಿಸ್ಕವರಿಯಲ್ಲಿ ಮಾಹಿತಿ […]