ಮಂಚಿ: ಹೊಸ ವಿದ್ಯುತ್ ತಂತಿ ಹಾಕಿಸಿಕೊಟ್ಟು ವೃದ್ಧ ದಂಪತಿಯ ಆತಂಕ ದೂರಾಗಿಸಿದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿ

ಮಂಚಿ: 80ನೇ ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಅಶಕ್ತ ವೃದ್ಧ ದಂಪತಿಯ ಮನೆಗೆ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿಯವರು ಹೊಸ ವಿದ್ಯುತ್ ತಂತಿ (ಸರ್ವಿಸ್ ಲೈನ್) ಯನ್ನು ಹಾಕಿಸಿಕೊಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ. ಈ ವೃದ್ಧ ದಂಪತಿಯ ಮನೆಯ ವಿದ್ಯುತ್ ಸಂಪರ್ಕದ ತಂತಿಯು ತುಂಡಾಗಿ ಬೀಳುವ ಪರಿಸ್ಥಿತಿಗೆ ತಲುಪಿದ್ದು, ಈ ಬಗ್ಗೆ ಹಿಂದಿನ ಸದಸ್ಯರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ನೂತನವಾಗಿ ಆಯ್ಕೆಗೊಂಡ ಸದಸ್ಯ […]