ವಿಧಾನಸೌಧದಲ್ಲಿ ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

ಬೆಂಗಳೂರು : ವಿಧಾನದೌಧದಲ್ಲಿ ರಜೀನಾಮೆ ಪರ್ವ ಮುಂದುವರಿಯುತ್ತಲೇ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಕಚೇರಿಯಿಂದ ಹೊರಬಂದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಅವರನ್ನು  ದಿಗ್ಬಂಧನಗೈದ ಪ್ರಸಂಗ ಬುಧವಾರ ನಡೆದಿದೆ. ಈ  ಘಟನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಎದುರಿಗೇ ನಡೆದದ್ದು ವಿಶೇಷ. ಈ ಪ್ರಸಂಗದ ಬಳಿಕ ಸಿದ್ದರಾಮಯ್ಯ ಸುಧಾಕರ್ ಜೊತೆ ಮಾತುಕತೆ ನಡೆಸಿದ್ದಾರೆ.