ಮಣಿಪಾಲ ಕೆಎಂಸಿಯಲ್ಲಿ ಯಶಸ್ವಿ ಮಕ್ಕಳ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ನಡೆಸಿದ ಮಕ್ಕಳ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆಸ್ಪತ್ರೆಯ ಹೃದಯ, ರಕ್ತನಾಳ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸೆ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಪ್ರಸಾದ್ ರೈ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ವಿದೇಶದಲ್ಲಿ ನೆಲೆಸಿರುವ ಭಾರತದ ಮೂಲದ ಯುವ ದಂಪತಿಗಳಿಗೆ ನವಜಾತ ಶಿಶು ಹುಟ್ಟುವ ಖುಷಿ ಒಂದು ಕಡೆಯಾದರೆ, ಅದೇ ಶಿಶು ಬದುಕುಳಿಯಲು ಹುಟ್ಟಿದ ಮೊದಲ ಕೆಲವು ದಿನಗಳಲ್ಲೇ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಗರ್ಭಾವಸ್ಥೆಯ ಅವಧಿಯಲ್ಲಿ ದೃಢಪಡಿತ್ತು. […]