ಕೋವಿಡ್ ಪ್ರಕರಣ ಗಣನೀಯ ಏರಿಕೆ; ಶೀಘ್ರದಲ್ಲೇ ಲಾಕ್‌ಡೌನ್ ಘೋಷಣೆ?
ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೆದರ್ಲೆಂಡ್ ದೇಶದ (ಡಚ್) ಸರ್ಕಾರವು ಶೀಘ್ರದಲ್ಲೇ ಭಾಗಶಃ ಲಾಕ್‌ಡೌನ್ ಘೋಷಿಸುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಕಳೆದ ಎರಡ್ಮೂರು ವಾರಗಳಿಂದ ಯುರೋಪಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಉಲ್ಬಣವಾಗಿದ್ದು, ಅಲ್ಲಿನ ಕೆಲ ದೇಶಗಳಲ್ಲಿ ಬಾರ್ ಅಂಡ್ ರೆಸ್ಟೊರೆಂಟ್, ಕ್ರೀಡಾ ಕೂಟಗಳನ್ನು ನಿರ್ಬಂಧಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಡಚ್ ಸರ್ಕಾರವು ಮೂರು ವಾರಗಳ ಕಾಲ ಬಾರ್ ಅಂಡ್ ರೆಸ್ಟೊರೆಂಟ್‌ಗಳು, ಅಗತ್ಯವಲ್ಲದ ಸಾಮಾಗ್ರಿಗಳ ಅಂಗಡಿಗಳು ಸೇರಿದಂತೆ ಕ್ರೀಡಾಕೂಟಗಳಿಗೆ ನಿರ್ಬಂಧ ವಿಧಿಸುವ ಕುರಿತು ಚಿಂತನೆ […]