ಉಕ್ರೇನ್ ನಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ; ಬೇಸರ ಹೊರಹಾಕಿದ ಪರ್ಕಳದ ವಿದ್ಯಾರ್ಥಿ ನಿಯಮ್ ರಾಘವೇಂದ್ರ.!

ಉಡುಪಿ: ಉಕ್ರೇನ್‌ ನಲ್ಲಿ ಭಾರತೀಯರನ್ನು ವಿಪರೀತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಭಾರತೀಯರಿಗೆ ರೈಲುಗಳಿಗೆ ಹತ್ತಲೂ ಕೂಡ ಬಿಡುತ್ತಿಲ್ಲ. ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಉಕ್ರೇನ್ ನ ವಿನ್ನಯ್ಟ್ಸಿಯಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸದ್ಯ ದೆಹಲಿಗೆ ವಾಪಾಸಾಗಿರುವ ಪರ್ಕಳದ ನಿವಾಸಿ ನಿಯಮ್ ರಾಘವೇಂದ್ರ ಬೇಸರ ಹೊರಹಾಕಿದ್ದಾರೆ. ಗುರುವಾರ ಮುಂಜಾನೆ 6.30ಕ್ಕೆ ಮುಂಬೈ ತಲುಪಿದ ನಿಯಮ್, ನಂತರ ದೆಹಲಿಯಲ್ಲಿರುವ ಹೆತ್ತವರ ಮಡಿಲಿಗೆ ಸೇರಿದ್ದಾರೆ. ಉಕ್ರೇನ್‌ ನಲ್ಲಿ ಎಲ್ಲಿಗೆ ಹೋದರೂ ಮೊದಲು ಅಲ್ಲಿಯ ಜನರಿಗೆ ಆದ್ಯತೆ ನೀಡುವುದಲ್ಲದೆ ಭಾರತೀಯರೊಂದಿಗೆ […]