ಇನ್ಮುಂದೆ ದಿನದ 24 ಗಂಟೆ ಹೋಟೆಲ್ ತೆರೆಯಲು ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಬೆಂಗಳೂರಿನಲ್ಲಿ ಇನ್ಮುಂದೆ 24×7 ಹೋಟೆಲ್‌ಗಳು ತೆರೆದಿರಲು ಅವಕಾಶ ನೀಡಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಇನ್ಮುಂದೆ ದಿನದ 24 ಗಂಟೆ, ವಾರದ 7 ದಿನಗಳು ಹೋಟೆಲ್‌ಗಳು ಕಾರ್ಯ ನಿರ್ವಹಿಸಲಿವೆ. ಸರ್ಕಾರ ಹೋಟೆಲ್, ಸ್ವೀಟ್ಸ್‌ಶಾಪ್, ಐಸ್‌ಕ್ರಿಂ ಶಾಪ್‌ಗೆ ಅನುಮತಿ ನೀಡಿದೆ. ಹಾಗೇಯೇ ಇನ್ಮುಂದೆ ರಾತ್ರಿಪೂರ್ತಿ ತೆರೆಯುವುದಕ್ಕೆ ಸರ್ಕಾರ ಒಪ್ಪಿಗೆಯನ್ನು ನೀಡಿದೆ.