ಮಲ್ಪೆ: ಮೇ 16ರಿಂದ ಸೆ. 15ರ ವರೆಗೆ ಪ್ರವಾಸಿ ಬೋಟ್‌ ಚಟುವಟಿಕೆ ಸ್ಥಗಿತ

ಮಲ್ಪೆ: ಮಳೆಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್‌ ಹಾಗೂ ಸೀ ವಾಕ್‌ ಪ್ರದೇಶಗಳಲ್ಲಿ ಪ್ರವಾಸಿ ಬೋಟ್‌ ಚಟುವಟಿಕೆಗಳನ್ನು ಮತ್ತು ಸೈಂಟ್‌ ಮೇರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್‌ ಚಟುವಟಿಕೆಗಳನ್ನು ಹಾರ್ಬರ್‌ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16ರಿಂದ ಸೆ. 15ರ ವರೆಗೆ ಸ್ಥಗಿತಗೊಳಿಸಲಾಗಿದ್ದು, ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳ ಪ್ರಕಟನೆ ತಿಳಿಸಿದೆ.

ಮಲ್ಪೆ: ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸಲು ರೂ. 5.50 ಕೋಟಿ ಬಿಡುಗಡೆ

ಉಡುಪಿ: ಪ್ರಮುಖ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ರೂ. 5.50 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಪ್ರಮುಖ ಕಾಮಗಾರಿ ಕೈಗೊಳ್ಳುವ ಬೇಡಿಕೆಯನ್ನು ಪೂರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ಟೂರಿಸಂ ವಿಷನ್ ಗ್ರೂಪಿನ ಶಿಫಾರಸ್ಸುಗಳಲ್ಲಿ ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ನಿರ್ಮಿಸುವ ಫೆರ್ರಿ ಜಟ್ಟಿ ನಿರ್ಮಿಸುವ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಮೇಲುಸ್ತುವಾರಿಯಲ್ಲಿ, […]

ಸೈಂಟ್ ಮೇರಿಸ್ ದ್ವೀಪದಲ್ಲಿ ಶುಲ್ಕ ರಹಿತ ಕ್ಯಾಮರಾ ಬಳಕೆಗೆ ಅವಕಾಶ

ಉಡುಪಿ: ಮಲ್ಪೆ ಅಭಿವೃದ್ಧಿ ಸಮಿತಿಯಿಂದ 2020ರ ಸಾಲಿನಲ್ಲಿ ಸೀವಾಕ್ ಪ್ರದೇಶ ಮತ್ತು ಸೈಂಟ್‌ಮೆರೀಸ್ ದ್ವೀಪ ಪ್ರದೇಶದ ನಿರ್ವಹಣೆ ಕುರಿತು ಕರೆಯಲಾದ ಟೆಂಡರಿನಲ್ಲಿ ದ್ವೀಪದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ (Commercial Activities like photo shoot) ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಶುಲ್ಕ ವಿಧಿಸಿ ನಿರ್ವಹಣಾದಾರರಿಗೆ ಆದಾಯಗಳಿಸುವ ಬಗ್ಗೆ ಅವಕಾಶವಿರುತ್ತದೆ ಹಾಗೂ ಇತರೆ ರೀತಿಯ ಕ್ಯಾಮರಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇ.ಒ.ಎಸ್, ಡಿಜಿಟಲ್ ಕ್ಯಾಮರಾ, ಸೋನಿ ಹೆಚ್.ಡಿ.ಆರ್.ಸಿ.ಎಕ್ಸ್ ಕ್ಯಾಮರಾಗಳನ್ನು ಮತ್ತು ಮೊಬೈಲ್‌ಗಳನ್ನು ಸೈಂಟ್‌ಮೆರೀಸ್ ದ್ವೀಪದಲ್ಲಿ ಬಳಸಲು ಯಾವುದೇ […]

ಮಲ್ಪೆ ಸೈಂಟ್ ಮೇರಿಸ್ ನಲ್ಲಿ ಸಿಬ್ಬಂದಿ ಅನುಚಿತ ವರ್ತನೆ ಪ್ರಕರಣ: ಸ್ಪಷ್ಟೀಕರಣ ನೀಡಿದ ಗುತ್ತಿಗೆದಾರರು

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಯೂಟ್ಯೂಬರ್ ಜೊತೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದು, ವಿಡಿಯೋ ಪ್ರಕಟಿಸಿದ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಸಿಬ್ಬಂದಿಗಳು ಆ ಯೂಟ್ಯೂಬರ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹೊರತು, ಯಾವುದೇ ದುರುದ್ದೇಶದಿಂದ ಅಲ್ಲ ಎಂದಿದ್ದಾರೆ. ಪ್ರಥಮವಾಗಿ ಯೂಟ್ಯೂಬರ್ ಬಳಿ ಕ್ಯಾಮೆರಾ ಶುಲ್ಕ ಪಾವತಿಸಿದ ರಶೀದಿ ಇರಲಿಲ್ಲ. ಈ ಹಿನ್ನೆಲೆ ಕ್ಯಾಮೆರಾ ಒಳಗೆ ಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಮಲ್ಪೆ […]

ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪಕ್ಕೆ ಬರುವ ಪ್ರವಾಸಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಕೂರ್ಮಾ ರಾವ್

ಉಡುಪಿ: ಮಲ್ಪೆ ಮತ್ತು ಸೈಂಟ್ ಮೇರೀಸ್ ದ್ವೀಪಕ್ಕೆ ದೇಶ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಬೀಚ್‌ನಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಈಗಾಗಲೇ ರಚಿಸಲಾದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಧ್ಯಯನ ಮಾಡಿ, ಮಲ್ಪೆ ಬೀಚ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಎಸ್.ಓ.ಪಿ ರಚಿಸಿ, ಅದರಂತೆ ಬೀಚ್ ಉಸ್ತುವಾರಿ ವಹಿಸಿಕೊಂಡಿರುವವರು ಮತ್ತು ಜೀವ ರಕ್ಷಕರು ಕಾರ್ಯನಿರ್ವಹಿಸುವುದರ ಮೂಲಕ ಪ್ರವಾಸಿಗರು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ತಮ್ಮ ಪ್ರವಾಸಿ ಕ್ಷಣಗಳನ್ನು ಆನಂದಿಸಲು ವ್ಯವಸ್ಥೆ ಮಾಡಬೇಕು ಜಿಲ್ಲಾಧಿಕಾರಿ […]