ಮಟ್ಟು ದೇವಳದಲ್ಲಿ ನವದಿನಗಳ ಸಂಭ್ರಮದ ಶ್ರೀರಾಮಸತ್ರ

ಕಟಪಾಡಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಮಹಾಸಂಕಲ್ಪ ಅಭಿಯಾನ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪಲಿಮಾರು ಮಠದ ಪಟ್ಟದದೇವರಾದ ಹನುಸ್ಸೇವಿತ ಸೀತಾ ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ದೇವರಿಗೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದರು ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ‘ಶ್ರೀರಾಮ ಸತ್ರ’ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಈ ಪರ್ವಕಾಲದಲ್ಲಿ ಶ್ರೀರಾಮ ತಾರಕ ಮಂತ್ರದ ಜಪ ಸಹಿತ ಹೋಮದೊಂದಿಗೆ, ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸತತ ಹತ್ತು ದಿನಗಳ ಕಾಲವೂ, […]