ಶ್ರೀಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವ ಆರಂಭ
ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆಯುವ ಭಜನಾ ಸಪ್ತಾಹವು ಸೋಮವಾರದಂದು ಪ್ರಾರಂಭವಾಯಿತು. ಶ್ರೀದೇವರಿಗೆ ಅರ್ಚಕರಾದ ಕೆ. ಜಯದೇವ್ ಭಟ್ ರವರ ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನುಸಲ್ಲಿಸಿ, ಮಂಗಳಾರತಿ ಬೆಳಗಿಸಿ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಯಲ್ಲಿರಿಸಿ ಮಹಾ ಮಂಗಳಾರತಿ ಬೆಳಗಿಸಿ ಬಳಿಕ ಭಜನಾ ದೀಪಸ್ತಂಭಕ್ಕೆ ಪ್ರಧಾನ ಅರ್ಚಕರಾದ ಜಯದೇವ್ ಭಟ್ ಆರತಿ ಬೆಳಗಿಸಿದರು. ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಶ್ರೀದೇವರನ್ನು ಹಾಗೂ ಪರಿವಾರ ದೇವರನ್ನು ವಿಶೇಷ […]