ಈದು ಶ್ರೀ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವ, ಶ್ರೀ ಪಂಚದುರ್ಗಾ ಮಂತ್ರ ಹೋಮ ಸಂಪನ್ನ

ಕಾರ್ಕಳ: ಈದು ಶ್ರೀ ವನದುರ್ಗಾ ದೇವಸ್ಥಾನ ಇದರ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಗಣಹೋಮ, ಶ್ರೀ ಪಂಚದುರ್ಗಾ ಮಂತ್ರ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ, ಈ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಬಾರಿ ಪ್ರಚಲಿತಕ್ಕೆ ಬರುತ್ತಿರುವ ಶೃದ್ಧಾ ಭಕ್ತಿಯ ಕೇಂದ್ರವಾಗಿದ್ದು, ಮುಂದಿನ […]