ಚಂದ್ರನತ್ತ ಪಯಣಿಸಿದ ಚಂದ್ರಯಾನ-3; ಆಗಸ್ಟ್ ವೇಳೆಗೆ ಚಂದ್ರನ ಮೇಲ್ಮೈಗೆ ಪಾದಾರ್ಪಣೆ ಮಾಡಲಿದೆ ವಿಕ್ರಮ್ ಲ್ಯಾಂಡರ್
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮೂನ್ ಮಿಷನ್ ಅನ್ನು ಪ್ರಾರಂಭಿಸಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ತೂಗುತ್ತದೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಭಾರತದ ಎರಡನೇ ಪ್ರಯತ್ನ ಇದಾಗಿದೆ. ಕೌಂಟ್‌ಡೌನ್‌ನ ಕೊನೆಯಲ್ಲಿ, ನಿಗದಿತ ಸಮಯದಲ್ಲಿ LVM3-M4 ರಾಕೆಟ್ ಭವ್ಯವಾಗಿ ಮೇಲಕ್ಕೆ ನೆಗೆದಿದೆ. ಲಿಫ್ಟ್-ಆಫ್ ಸಾಮಾನ್ಯ ಮತ್ತು ಸುಗಮವಾಗಿತ್ತು ಎಂದು ಇಸ್ರೋ ಹೇಳಿದೆ. ಬೇರ್ಪಡಿಕೆಯ ಹಂತಗಳನ್ನು […]