ಕಾಪು ಪೊಲೀಸರಿಂದ ವಿಶೇಷ ಕಾರ್ಯಾಚರಣೆ: ನಾಲ್ವರು ಅಂತರ್ ಜಿಲ್ಲಾ ಚೋರರ ಬಂಧನ

ಕಾಪು: ಕಾಪು ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರ್ ಜಿಲ್ಲಾ ಚೋರರನ್ನು ಬಂಧಿಸಿದ್ದು, ಬಂಧಿತರಿಂದ ಲಾರಿ, ಸ್ವಿಫ್ಟ್ ಕಾರು, ಮೊಬೈಲ್ ಪೋನ್ ಹಾಗೂ ನಗದು ಸಹಿತ ₹12.47 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪಲಿಮಾರು ಗ್ರಾಮದ ಅಡ್ವೆ ನಿವಾಸಿ ಆಶ್ರಫ್ (27), ಉತ್ತರ ಕನ್ನಡ ಜಿಲ್ಲೆ ಮೂಲದ ಪ್ರಸ್ತುತ ಪಡುಬಿದ್ರಿ ಕಂಚಿನಡ್ಕ ಶಾಲೆ ಬಳಿ ವಾಸವಿರುವ ಮುನ್ನಾ ಯಾನೆ ಮಜೀರ್ ಶೇಖ್ (38), ಶಿವಮೊಗ್ಗ ಜಿಲ್ಲೆಯ ಮಂಜುನಾಥ ಯಾನೆ […]