ISRO ದಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗೃತಿ ತರಬೇತಿ: ಏಪ್ರಿಲ್ 8 ರಿಂದ ನೋಂದಾವಣೆ

ಬೆಂಗಳೂರು: Space Science and Technology Awareness Training (START) – 2024(ಆನ್ ಲೈನ್ ಮಾದರಿ) ಅನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು https://jigyasa.iirs.gov.in/START ನಲ್ಲಿ ನೋಂದಾಯಿಸಿಕೊಳ್ಳಬಹುದು. ಏ. 15 ರಿಂದ ಮೇ.3 ರವರೆಗೆ ತರಬೇತಿ ನಡೆಯಲಿದೆ. ಥೀಮ್: ಸೌರ ಮಂಡಲದ ಪರಿಶೋಧನೆ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ ಶೈಕ್ಷಣಿಕ ಸಂಸ್ಥೆಗಳು ಏಪ್ರಿಲ್ 2, 2024 ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಏಪ್ರಿಲ್ 8, 2024 ರಿಂದ ನೋಂದಾಯಿಸಿಕೊಳ್ಳಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.