ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ 7.8 ತೀವ್ರತೆಯ ಭೂಕಂಪ: ಹತ್ತಿರದ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ
ಶುಕ್ರವಾರ ದಕ್ಷಿಣ ಪೆಸಿಫಿಕ್‌ನ ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಪೂರ್ವಾಭಾವಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ವನವಾಟು, ಫಿಜಿ ಮತ್ತು ಕಿರಿಬಾಟಿ ಸೇರಿದಂತೆ ಹತ್ತಿರದ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಫಿಜಿ, ವನವಾಟು ಮತ್ತು ನ್ಯೂ ಕ್ಯಾಲೆಡೋನಿಯಾದ ನಡುವೆ ಇರುವ ಭೂಕಂಪದ ಕೇಂದ್ರದಿಂದ 1,000 ಕಿಲೋಮೀಟರ್ (621 ಮೈಲುಗಳು) ಒಳಗೆ ಇರುವ ಕರಾವಳಿಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಭೂಕಂಪವು 38 ಕಿಲೋಮೀಟರ್ […]