ರೈತರ ಬದುಕು ಬವಣೆಯ ಅನಾವರಣೆಯ “ಶ್ರೀಮಂತ”: ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ ಸೋನು ಸೂದ್

ಹಾಸನ್ ರಮೇಶ್ ಎಂಬ ಕಾವ್ಯನಾಮದಿಂದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಟಿ.ಕೆ ರಮೇಶ್ ಇದೀಗ ತನ್ನದೇ ಆದ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ “ಶ್ರೀಮಂತ” ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು, ಜಿ.ನಾರಾಯಣಪ್ಪ ಮತ್ತು ವಿ.ಸಂಜಯ್ ಬಾಬು ಸಹನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. “ಶ್ರೀಮಂತ” ಚಲನಚಿತ್ರವು ರೈತರ ದೈನಂದಿನ ಬದುಕು ಬವಣೆಯ ಅನಾವರಣವಾಗಿದ್ದು ಆತನೇ ಜಗತ್ತಿನ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು […]