ಇಂಡಿಯನ್ ಆಯಿಲ್ ನಿಂದ ‘ಸೂರ್ಯ ನೂತನ್’ ಒಳಾಂಗಣ ಸೌರ ಅಡುಗೆ ವ್ಯವಸ್ಥೆ ಅಭಿವೃದ್ದಿ

ನವದೆಹಲಿ: ಇಂಡಿಯನ್ ಆಯಿಲ್ ಕಂಪನಿಯು ಹೊಸದಾದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಇದಕ್ಕೆ ‘ಸೂರ್ಯ ನೂತನ್’ ಎಂದು ಹೆಸರಿಸಿದೆ. ಇದು ಸೂರ್ಯನಿಂದ ಶಕ್ತಿಯನ್ನು ಸಂಗ್ರಹಿಸಿ, ವಿಶೇಷವಾಗಿ ವಿನ್ಯಾಸಗೊಳಿಸಿದ ಬಿಸಿ ಮಾಡುವ ಘಟಕದ ಮೂಲಕ ಸೂರ್ಯನ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುತ್ತದೆ. ಈ ಸೂರ್ಯ ನೂತನ್ ಉತ್ಪನ್ನವನ್ನು ಪುನರ್ಭರ್ತಿ(ರೀಚಾರ್ಜ್) ಮಾಡಬಹುದು ಮತ್ತು ನಾಲ್ಕು ವ್ಯಕ್ತಿಗಳಿಗೆ ಆಹಾರ ತಯಾರಿಸಲು ಇದು ಸೂಕ್ತವಾಗಿದೆ. ಶುಕ್ರವಾರ ನವದೆಹಲಿಯಲ್ಲಿ ಸೂರ್ಯ ನೂತನ್ ಸಿಸ್ಟಂನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ […]