ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ಬಳಿಕ ಕುಟುಂಬದೊಂದಿಗೆ ಪುನರ್ಮಿಲನ ಕಂಡ ಯುವಕ

ಮಂಜೇಶ್ವರ: ಇಲ್ಲಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಮರಳಿ ಕುಟುಂಬಕ್ಕೆ ಸೇರಿಸಲಾಯಿತು. 2021 ಸೆಪ್ಟೆಂಬರ್ 15ರಂದು, ಇಮ್ತಿಯಾಸ್ ಎಂಬ 27 ವರ್ಷದ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮಂಜೇಶ್ವರದ ಬೀದಿಯಿಂದ ರಕ್ಷಿಸಿ ಆತನನ್ನು ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆದಾಖಲಿಸಿತ್ತು. ದಾಖಲಾತಿಯ ಸಮಯದಲ್ಲಿ, ಇಮ್ತಿಯಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಆತನಲ್ಲಿ ಮಾನಸಿಕ ಆರೋಗ್ಯಕ್ಕೆಸಂಬಂಧಪಟ್ಟ ರೋಗಲಕ್ಷಣಗಳು ಕಂಡುಬಂದವು. ಸ್ನೇಹಾಲಯದ ತಂಡವು ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿ ಮುಂಬೈಯ ಶ್ರದ್ಧಾ […]

ಸ್ನೇಹಾಲಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ

ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿ. 21 ರಂದು ತನ್ನ ನಿವಾಸಿಗಳಿಗಾಗಿ ಕ್ರಿಸ್‌ಮಸ್‌ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಗಳು ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತುಇದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ಕೇಂದ್ರದ ನಿರ್ದೇಶಕ ಜೋಸೆಫ್‌ ಕ್ರಾಸ್ತಾ ಹೇಳಿದರು. ಸಿಬ್ಬಂದಿ […]

ಮಂಗಳೂರು: ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನ

ಮಂಗಳೂರು: ಭರವಸೆಯ ಬೆಳಕಾಗಿರುವ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಬೆಂದೂರಿನಲ್ಲಿರುವ ಲೋಟಸ್ ಪ್ಯಾರಡೈಸ್ ನಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನ” 2023 ವನ್ನು ಆಚರಿಸಲಾಯಿತು. ಮಂಗಳೂರು ಮತ್ತು ಕೇರಳ ಗಡಿ ಭಾಗದ ಒಂಬತ್ತು ಪ್ರತಿಷ್ಠಿತ ಕಾಲೇಜುಗಳ 250 ಉತ್ಸಾಹಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾನಸಿಕ ಆರೋಗ್ಯದ ಸಮಸ್ಯೆಗಳ ಮೇಲೆ ಮೂವರು ಗಣ್ಯ ವೈದ್ಯಕೀಯ ತಜ್ಞರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವು ದೀಪ ಬೆಳಗುವುದರೊಂದಿಗೆ ಪ್ರಾರಂಭವಾಯಿತು. ಮಂಗಳೂರಿನ ಯೇನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಎಂ ಡಿ ಮತ್ತು […]