ಡಿ. 4-5 ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತೋತ್ಸವ; ವಾರ್ಷಿಕ ದಿನಾಚರಣೆ

ಉಡುಪಿ: ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ ಡಿ. 4 ರಂದು ಸಂಸ್ಕೃತೋತ್ಸವ ನಡೆಯಲಿದ್ದು ಅದರ ಅಂಗವಾಗಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿರ್ದೇಶಕ ಡಾ. ರಾಮಕೃಷ್ಣಭಟ್‌, ಸಂಸ್ಕೃತೋಪನ್ಯಾಸಕ ವಿದ್ವಾನ್ ಶ್ರೀನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಸ್ಕೃತ ಪದ್ಯಗಾನ ಹಾಗೂ ಜಯ ವೈಜಯಂತೀ ಎಂಬ ಸಂಸ್ಕೃತ ನಾಟಕ ಪ್ರದರ್ಶನಗೊಳ್ಳಲಿದೆ. ವಾರ್ಷಿಕೋತ್ಸವ : ಡಿ. 5 ರಂದು […]