ಮಹಿಳಾ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತದ ರೋಮಾಂಚಕ ಕದನ: ಸೂಪರ್ ಓವರ್ ನ ಅದ್ಭುತ ಪ್ರದರ್ಶನದಿಂದ ಪಂದ್ಯ ಭಾರತದ ತೆಕ್ಕೆಗೆ

ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ20 ಪಂದ್ಯ ನಡೆದಿದ್ದು, ಇದು ಅತ್ಯುತ್ತಮ ಟಿ20 ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಐದು ಪಂದ್ಯಗಳ ಸರಣಿಯ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ 30,000 ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಈ ಆಟವು ಟೈನಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ ಸೂಪರ್ ಓವರ್ ಎಸೆಯಲಾಯಿತು. ಟೀಮ್ ಇಂಡಿಯಾದ ಮಹಿಳಾ ಘಟಕವು ಮೊದಲ ಬಾರಿಗೆ ಸೂಪರ್ ಓವರ್ ಆಡುತ್ತಿತ್ತು […]