ಮತ್ತೆ ಮುಳುಗಿತು ಮಂಗಳೂರು: ಅವೈಜ್ಞಾನಿಕ ಕಾಮಗಾರಿಗಳಿಂದ ನದಿಯಂತಾಯ್ತು ಸ್ಮಾರ್ಟ್ ನಗರದ ರಸ್ತೆಗಳು

ಮಂಗಳೂರು: ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸವಾರರು, ಪಾದಚಾರಿಗಳು ದೋಣಿಯ ಸಹಾಯದಿಂದ ಕೆಲಸ ಕಾರ್ಯಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸ್ಥಿತಿಯು ಸಾಮಾನ್ಯವೆಂಬಾತಾಗಿದ್ದು, ಸ್ಮಾರ್ಟಿ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ವಿಶ್ವ ಪ್ರಸಿದ್ದ ಮಂಗಳೂರು ನಗರಕ್ಕೆ ಈ ಸಮಸ್ಯೆಯು ಕಪ್ಪು ಚುಕ್ಕೆಯಂತಾಗಿ ಕಾಡುತ್ತಿದೆ. ಚರಂಡಿ ವ್ಯವಸ್ಥೆಯೇ ಇಲ್ಲದ ಹೆದ್ದಾರಿಗಳು, ಹೊಂಡ ಬಿದ್ದ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿಗಳು, ನೀರಿನ ಹರಿವು ಸರಾಗವಾಗಲು ಮಳೆಗಾಲಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಿ ಕ್ರಮ […]