71ನೇ ವಿಶ್ವ ಸುಂದರಿ ಸ್ಪರ್ಧೆಯ ಆತಿಥೇಯ ಪ್ರತಿನಿಧಿಯಾಗಿ ಜಗತ್ತನ್ನು ಸ್ವಾಗತಿಸಲಿದ್ದಾರೆ ಸಿನಿಶೆಟ್ಟಿ
ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ 71ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಸಿನಿಶೆಟ್ಟಿ ಆತಿಥೇಯ ಪ್ರತಿನಿಧಿಯಾಗಿದ್ದು ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ಘಳಿಗೆಗೋಸ್ಕರ ತುಂಬಾ ಸಮಯದಿಂದ ಕಾಯುತ್ತಿದ್ದೆ, ನಾನು ಆತಿಥೇಯ ಪ್ರತಿನಿಧಿಯಾಗಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಭಾರತಕ್ಕೆ ಸ್ವಾಗತಿಸಲು, ಭಾರತದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರದ ಪರಿಚಯವನ್ನು ಜಗತ್ತಿಗೆ ಪರಿಚಯಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. […]
ವೆಬ್ ಸೀರೀಸ್ ಸಾಕು, ಸಿನಿಮಾ ಬೇಡ, ಮಿಸ್ ವರ್ಲ್ಡ್ ಕಿರೀಟ ಬೇಕು: ಮಿಸ್ ಇಂಡಿಯಾ ಸಿನಿ ಶೆಟ್ಟಿ
ಉಡುಪಿ: ಮಿಸ್ ಇಂಡಿಯಾ ಆಗಿ ಆಯ್ಕೆಯಾದ ನಂತರ ಸೋಮವಾರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಿನಿ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಚೆಂಡೆ, ಕೊಂಬು, ವಾದ್ಯಘೋಷಗಳೊಂದಿಗೆ ಮೆರವಣಿಗೆಯೊಂದಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ವೆಬ್ ಸೀರೀಸ್‌ಗಳಲ್ಲಿ ನಟಿಸಿರುವುದರಿಂದ ನಟನೆಯ ಅನುಭವ ಇದೆ. ಸದ್ಯ ಸಿನಿಮಾದಲ್ಲಿ ನಟಿಸುವ ಗುರಿ ಇಲ್ಲ. ನನ್ನ ಮುಂದಿನ ಕನಸು ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದು ಎಂದಿದ್ದಾರೆ. ತುಳು ನನ್ನ ಮಾತೃ ಭಾಷೆ, ತುಳುವಿನಲ್ಲಿ […]
ಮಿಸ್ ಇಂಡಿಯಾ ಕಿರೀಟ ತೊಟ್ಟ ಕರಾವಳಿಯ ಕುವರಿ ಸಿನಿ ಶೆಟ್ಟಿಗೆ ದೈವ ದೇವರ ಮೇಲೆ ಅಪಾರ ಭಕ್ತಿ; ತುಳುನಾಡಿನ ತೆನಸಿನ ಮೇಲೆ ಅಗಾಧ ಪ್ರೀತಿ!
ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಹೊಸಮನೆ ಸದಾನಂದ ಬಿ. ಶೆಟ್ಟಿ ಮತ್ತು ಬೆಳ್ಳಂಪಳ್ಳಿ ಪುಂಚೂರು ಮಾಧವ ನಿಲಯ ಹೇಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸಿನಿ ಶೆಟ್ಟಿ ಹುಟ್ಟಿದ್ದು ಮತ್ತು ಬೆಳೆದಿದ್ದೆಲ್ಲಾ ಮುಂಬಯಿಯಲ್ಲಿಯಾದರೂ ತಮ್ಮ ಮೂಲ ಊರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಇದು ನನ್ನ ಜೀವನದ ಅದ್ಭುತ ಕ್ಷಣ, ಬಹಳಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ, ಮಿಸ್ ಇಂಡಿಯಾ ಆಗಿ ಮೂಡಿ ಬಂದದ್ದಕ್ಕೆ ಖುಷಿಯಾಗಿದೆ. ಹೆತ್ತವರ ಪ್ರೋತ್ಸಾಹ, ದೈವ ದೇವರ ಆಶೀರ್ವಾದದೊಂದಿಗೆ […]