ಮಲ್ಪೆ ಬೀಚ್ ಉತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ವತಿಯಿಂದ ಜನವರಿ 20 ರಿಂದ 22 ರ ವರೆಗೆ ಉಡುಪಿ ರಜತ ಉತ್ಸವದ ಪ್ರಯುಕ್ತ ನಡೆಯುವ ಮಲ್ಪೆ ಬೀಚ್ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ. 20 ರಿಂದ 21 ರ ವರೆಗೆ ಗಾಳಿಪಟ ಉತ್ಸವ, ಆರ್ಟ್ ಕ್ಯಾಂಪ್, ಫೋಟೋ ಎಕ್ಸಿಬಿಷನ್, ಫುಡ್ ಫೆಸ್ಟಿವಲ್ ನಡೆಯಲಿದ್ದು, ಜ. 21 ಮತ್ತು 22 ರಂದು ಈಜು ಸ್ಪರ್ಧೆ, ಪುರುಷರ ಕಬಡ್ಡಿ ಸ್ಪರ್ಧೆಗಳು ನಡೆಯಲಿವೆ. […]

ಉಡುಪಿ ರಜತಮಹೋತ್ಸವ: ಕಾಪು- ಮಲ್ಪೆ ಬೀಚ್ ನಲ್ಲಿ ಸಮಾರಂಭ

ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮವು ಜನವರಿ 20 ರಿಂದ 22 ರ ವರೆಗೆ ಮಲ್ಪೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ತಾಲೂಕು ಆಡಳಿತ ಇವರ ವತಿಯಿಂದ ಉಡುಪಿ […]

ಜ. 22 ರಂದು ಬೀಚ್ ಉತ್ಸವದಲ್ಲಿ ಶಾಲಾಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

ಉಡುಪಿ: ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜನವರಿ 20 ರಿಂದ 22 ರ ವರೆಗೆ ಮಲ್ಪೆ ಬೀಚ್‌ನಲ್ಲಿ ಬೀಚ್ ಉತ್ಸವ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜ. 22 ರಂದು ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಚಿತ್ರಕಲಾ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. 1 ರಿಂದ 4 ನೇ ತರಗತಿಯ ಕಿರಿಯ ಪ್ರಾಥಮಿಕ ವಿಭಾಗದವರಿಗೆ ಐಚ್ಛಿಕ ವಿಷಯದ ಕುರಿತು, 5 ರಿಂದ 7 ನೇ ತರಗತಿಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ […]

ಚಾಂತಾರು: ಜನವರಿ22 ರಂದು ಚಾನ್ ಸ್ಟಾರ್ ಯೂತ್ ಕ್ಲಬ್ ಇದರ ರಜತ ಮಹೋತ್ಸವ ಸಮಾರಂಭ

ಕುಂದಾಪುರ: ಇಲ್ಲಿನ ಚಾಂತಾರಿನ ಚಾನ್ ಸ್ಟಾರ್ ಯೂತ್ ಕ್ಲಬ್ ಇದರ ರಜತ ಮಹೋತ್ಸವ ಕಾರ್ಯಕ್ರಮವು ಜನವರಿ 22 ಭಾನುವಾರದಂದು ಚ್ಯವನ ಋಷಿಗಳ ನಾಡಾದ ಚಾಂತಾರಿನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. 25 ವರ್ಷಗಳ ಸಾರ್ಥಕ ಸ್ನೇಹ ಪಯಣದ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ 25 ಜನ ಸಾಧಕರನ್ನು ಸನ್ಮಾನಿಸಲಾಗುವುದು ಹಾಗೂ ಶರಣ್ಯ ಚಾಂತಾರು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಲಾಗುವುದು. ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಖಂಡ […]

25 ವರ್ಷಗಳಿಂದ ಶ್ರೇಷ್ಠತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಡಾ| ಜೆರಾಲ್ಡ್ ಐಸಾಕ್ ಲೋಬೋ

ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 25 ನೇ ವರ್ಷದ ರಜತ ಸಂಭ್ರಮ ಸಮಾರಂಭ ವು ಡಿ18 ರವಿವಾರದಂದು ಶೋಕ ಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ನಡೆಯಿತು. ಉಡುಪಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಮಾಡಿ ಮಾತನಾಡಿ, ವಿಶ್ವದ ಎಲ್ಲಾ ಕ್ಷೇತ್ರಗಳಿಗಿಂತಲೂ ಇಂದು ಬಲಿಷ್ಠವಾಗಿ ಬೆಳೆದಿರುವುದು ಸೇವಾ ಕ್ಷೇತ್ರ. ಇದಕ್ಕೆ ಸೇವಾ ಕ್ಷೇತ್ರದ ಗುಣಮಟ್ಟ ಕಾರಣ. ಸೇವಾ ಕ್ಷೇತ್ರದಲ್ಲಿ ವಸ್ತು […]