ಸಿಂಗಲ್ ಲೇಔಟ್ ಸಮಸ್ಯೆ: ಕೋರ್ಟ್ ಆದೇಶಕ್ಕನುಗುಣವಾಗಿ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದಾರಾವ್ ಆಗ್ರಹ
ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾಧ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು, ಸಮಸ್ಯೆಗೆ ಸ್ಪಂದಿಸಬೇಕಾದ ಸರಕಾರ ಮತ್ತು ಜನಪ್ರತಿನಿದಿಗಳು ನಿರ್ಲಕ್ಷವಹಿಸಿದ್ದ ಕಾರಣ ಪರಿಹಾರ ಸಾಧ್ಯವಾಗಿರಲಿಲ್ಲ. ಆದರೀಗ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಈ ಆದೇಶವನ್ನೇ ಮಾದರಿಯಾಗಿ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ. ನಗರದಲ್ಲಿ ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, […]