ಕಾಂಗ್ರೆಸ್‌ ವಕ್ತಾರರಾಗಿ ಶುಭದ ರಾವ್‌ ನೇಮಕ

ಕಾರ್ಕಳ: ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವಕ್ತಾರರಾಗಿ ಪುರಸಭಾ ಸದಸ್ಯ ಶುಭದ ರಾವ್‌ ಅವರು ನೇಮಕಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ನಿರ್ದೇಶನದ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಕಳ ಪುರಸಭೆಗೆ ಮೂರನೇ ಬಾರಿಗೆ ಚುನಾಯಿತ ಸದಸ್ಯರಾಗಿ ಅವರು, ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.