ಶಿವಪಾಡಿ: ಫೆ.25 ರಿಂದ ಮಾ. 5 ರವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಅತಿರುದ್ರಯಾಗ

ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಐತಿಹಾಸಿಕ ಅತಿರುದ್ರಯಾಗವನ್ನು ಫೆ.25 ರಿಂದ ಮಾ. 4 ರವರೆಗೆ ಆಯೋಜಿಸಲಾಗುವುದು. ಯಾಗದ ಕುರಿತು ನಡೆದ ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಮಣಿಪಾಲ ವಿಶ್ವ ವಿದ್ಯಾಲಯದ ಸಹಕುಲಪತಿ ಹಾಗೂ ಯಾಗ ಸಮಿತಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆಯ ಪರವಾಗಿ ನೀಡಲಾಗುವುದು ಎಂದರು. ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಠದ ಉಡುಪಿ ಶಾಖೆಯ ಧರ್ಮಾಧಿಕಾರಿ ನಾಗೇಶ್ ಶಾಸ್ತ್ರಿ ಇವರು […]

ಭಾರೀ ಮಳೆಗೆ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತ, ಪರ್ಯಾಯ ಮಾರ್ಗ ಸಂಚಾರ

ಕಾರ್ಕಳ : ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಶೃಂಗೇರಿ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ- ಶೃಂಗೇರಿ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಪ್ರಯಾಣಿಕರಿಗಾಗಿ ಬದಲಿ ಮಾರ್ಗದ ವಿವರ: ಶೃಂಗೇರಿ – ಕೆಲ್ಲಾರ್ – ಮೀಗಾ ಮಾರ್ಗವಾಗಿ ಬೇಗಾರ್ ಮೂಲಕ ಆಗುಂಬೆ ತಲುಪಬಹುದಾಗಿದೆ ಅಥವಾ ಶೃಂಗೇರಿ – ಕಾವಡಿ – ಬಿಲಗದ್ದೆ – ಶಾನುವಳ್ಳಿ – ಮಾವಿನಕಟ್ಟೆ – ಬೇಗಾರ್ ಮಾರ್ಗವಾಗಿ ಆಗುಂಬೆ ತಲುಪಬಹುದಾಗಿದೆ.