ಶಿಥಿಲಗೊಂಡಿದೆ ಶಿರಿಬೀಡಿನ ಕಿರುಸೇತುವೆ; ದೂರು ನೀಡಿದರೂ ಸ್ಪಂದಿಸದ ಅಧಿಕಾರಿಗಳು

ಉಡುಪಿ: ಇಲ್ಲಿನ ಶಿರಿಬೀಡು ವಾರ್ಡಿನಲ್ಲಿ ಕಿರುಸೇತುವೆಯು ಶಿಥಿಲಗೊಂಡಿದ್ದು, ಜನರ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಸೇತುವೆ ಮೇಲೆ ಪ್ರತಿನಿತ್ಯವೂ ನೂರಾರು ಪಾದಾಚಾರಿಗಳು ಜೊತೆಗೆ ದ್ವಿಚಕ್ರ ವಾಹನ ಸವಾರರು ಕೂಡ ಸಂಚರಿಸುತ್ತಾರೆ. ಸೇತುವೆಯು ಉಡುಪಿ ಬಸ್ ಸ್ಟ್ಯಾಂಡ್ ನಿಂದ ತಾಲೂಕ್ ಆಫೀಸ್ ಗೆ ಒಳದಾರಿಯಾಗಿದೆ. ಮಾತ್ರವಲ್ಲದೆ, ಅಂಬಲಪಾಡಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಾಗೂ ಸೈಂಟ್ ಸಿಸಿಲಿಸ್ ಕಾನ್ವೆಂಟ್ ಶಾಲೆಗೂ ಒಳದಾರಿಯಾಗಿದ್ದು ದಿನನಿತ್ಯ ನೂರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಶಿಥಿಲಾವಸ್ತೆಯಲ್ಲಿರುವ ಸೇತುವೆ ಮೂಲಕ ಸಂಚರಿಸಲು ಜನ ಭಯ ಪಡುವಂತಾಗಿದೆ. ಉಡುಪಿ […]