ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಸಾಮೂಹಿಕ ಚೂಡಿ ಪೂಜೆ
ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಮಹಿಳಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜೆ ಆದಿತ್ಯವಾರ ನಡೆಯಿತು. ಮಂಡಳಿಯ ಅಧ್ಯಕ್ಷೆ ಸುಧಾ ಆರ್ ಶೆಣೈ ಮಾರ್ಗದರ್ಶನದಲ್ಲಿ ಪ್ರಕೃತಿ ಯಲ್ಲಿ ದೊರೆಯುವ ವಿವಿಧ ಜಾತಿಯ ಹೂಗಳಿಂದ ತಯಾರಿಸಿದ ಚೂಡಿ ಯನ್ನು ತುಳಸಿ ಸನ್ನಿಧಾನದಲ್ಲಿ ಪೊಜೆಸಿ ದೇವರಿಗೆ ಅರ್ಪಣೆ ಮಾಡಲಾಯಿತು. ಹೊಸ್ತಿಲ ಪೂಜೆ ನೆಡೆಸಿ , ಮುತ್ತೈದೆಯರು ಚೂಡಿಯನ್ನು ಪರಸ್ಫರ ವಿನಿಮಯ ಮಾಡಿಕೊಂಡರು.
ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದದ ವತಿಯಿಂದ ರಾಷ್ಟ್ರಧ್ವಜ ವಿತರಣೆ
ಉಡುಪಿ: ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದ ವತಿಯಿಂದ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಎದುರಿನ ಶ್ಯಾಮ ಪ್ರಸಾದ್ ಕುಡ್ವರವರ ಗೃಹ ಕಚೇರಿಯಲ್ಲಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಯು ವಿಶ್ವನಾಥ ಶೆಣೈ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯರಾಮ ಕಾಮತ್, ಮೋಹನ್ ದಾಸ್ ಶೆಣೈ, ವಿನಾಯಕ ಬಾಳಿಗಾ, ಸತೀಶ್ ಕಾಮತ್, ಇತರ ಗಣ್ಯರು ಉಪಸ್ಥಿತರಿದ್ದರು
ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋ ರಾತ್ರಿ ಭಜನಾ ಸಪ್ತಾಹ ಸಂಪನ್ನ
ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಊರ ಪರಊರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನಡೆದು ಮಂಗಳವಾರದಂದು 122ನೇ ಭಜನಾ ಸಾಪ್ತಾಹ ಮಂಗಲೋತ್ಸವ ಸಂಪನ್ನಗೊಂಡಿತು. ದೇವಳದ ಅರ್ಚಕ ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಭಜನಾ ಆರಾಧ್ಯ ದೇವರಾದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ದೀಪ ಸ್ತಂಭಕ್ಕೆ ಪ್ರದಕ್ಷಿಣೆ ಗೈದರು. ಶ್ರೀ ದೇವರಿಗೆ […]
ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಗರ ಭಜನಾ ಕಾರ್ಯಕ್ರಮ
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಂಗಳವಾರದಂದು 122 ನೇ ಭಜನಾ ಸಾಪ್ತಾಹ ಅಂಗವಾಗಿ ನಗರ ಭಜನೆ ನಡೆಯಿತು ದೇವಳದಿಂದ ಹೊರಟ ನಗರ ಭಜನೆಯಲ್ಲಿ ನೂರಾರು ಯುವಕರು ಹಾಗೂ ಸಮಾಜ ಭಾಂದವರು ಹರಿನಾಮ ಸ್ಮರಣೆ ಮಾಡುತ್ತಾ ಉಡುಪಿ ಮುಖ್ಯ ರಸ್ತೆಯವರೆಗೆ ಸಾಗಿ ಪುನಃ ದೇವಳಕ್ಕೆ ವಾಪಾಸಾಗಿ ಭಜನೆಯನ್ನು ಸಮಾಪ್ತಿಗೊಳಿಸಿದರು.
ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆಯ ಶ್ರೀ ದೇವರ ಸನ್ನಿಧಿಯಲ್ಲಿ ಮಂಗಳವಾರ ಮಹೋತ್ಸವಕ್ಕೆ ದೇವಳದ ಅರ್ಚಕ ವಿನಾಯಕ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಭಜನಾ ಮಂಟಪದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ಭಜನೆ ಆರಂಭಗೊಂಡಿತು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಮತ್ಸ್ಯಾವತಾರ ಅಲಂಕಾರ ಹಾಗೂ ದೇವಾಲಯಕ್ಕೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಕ್ಷೇತ್ರದಲ್ಲಿ ಊರಿನ ಹಲವು ಭಜನಾ ಮಂಡಳಿಗಳಿಂದ 7 ದಿನಗಳ ಕಾಲ ಅಹೋ […]