ಮಧ್ವನವಮಿಯ ಪ್ರಯುಕ್ತ ಮಧ್ವಾಚಾರ್ಯರಿಗೆ ಪೂಜೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಮಧ್ವನವಮಿಯ ಪ್ರಯುಕ್ತ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಅದೃಶ್ಯರಾಗಿ ಸನ್ನಿಹಿತರಾಗಿರುವ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪಾದ್ಯವನ್ನಿತ್ತು ವಿಶೇಷ ಪೂಜೆ ಸಲ್ಲಿಸಿದರು.
ನಟಿ ಪ್ರೇಮಾ ಶ್ರೀಕೃಷ್ಣಮಠ ಭೇಟಿ
ಉಡುಪಿ: ಶ್ರೀಕೃಷ್ಣಮಠಕ್ಕೆ ಕನ್ನಡ ಚಲನಚಿತ್ರ ನಟಿ ಪ್ರೇಮಾ ಅವರು ನಟಿ ಅನು ಅಯ್ಯಪ್ಪ ಅವರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಶ್ರೀಕೃಷ್ಣ ಮಠದಲ್ಲಿ ಹಗಲು ರಥೋತ್ಸವ ಸಂಪನ್ನ
ಉಡುಪಿ: ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಸಪ್ತೋತ್ಸವದ ಕೊನೆಯ ದಿನದ ಚೂರ್ಣೋತ್ಸವ(ಹಗಲು ರಥೋತ್ಸವ)ವು ಅವಭ್ರತದೊಂದಿಗೆ ವೈಭವದಿಂದ ನಡೆಯಿತು. ಅಷ್ಟಮಠದ ಎಲ್ಲಾ ಯತಿಗಳು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು.
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಮಣಿಪಾಲ ಸಂಶೋಧನಾ ವಿಭಾಗದ ಶ್ರೀನಿವಾಸನ್ ಎಚ್.ಆರ್
ಉಡುಪಿ: ಮಣಿಪಾಲ ಸಂಶೋಧನಾ ವಿಭಾಗದ ನವಿತಾಸ್ ಲೈಫ್ ಸೈನ್ಸಸ್ ನ ಶ್ರೀನಿವಾಸನ್ ಎಚ್.ಆರ್, ಮಣಿಪಾಲ ಎಕ್ರೋನ್ ಅಕುನೊವಾ ಇದರ ನಿರ್ದೇಶಕ ಗೌರಿಶಂಕರ್, ಉಪಾಧ್ಯಕ್ಷ ಡಾ.ವಾಸುದೇವ ಶೆಣೈ ಇವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಮಾಡಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀವಿದ್ಯಾವಾರಿನಿಧಿತೀರ್ಥ ಸ್ವಾಮಿಜಿಗಳ ಆರಾಧನೆ ಪ್ರಯುಕ್ತ ವೃಂದಾವನ ಪೂಜೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಅಷ್ಟಮಠದ ಯತಿಗಳ ವೃಂದಾವನ ಸಮುಚ್ಚಯದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮಿಜಿ ಹಾಗೂ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಗಳು ಕಾಣಿಯೂರು ಮಠದ ಪರಮಪೂಜ್ಯ ಶ್ರೀವಿದ್ಯಾವಾರಿನಿಧಿತೀರ್ಥ ಸ್ವಾಮಿಜಿಗಳ ಆರಾಧನೆಯ ಪ್ರಯುಕ್ತ ಅವರ ವೃಂದಾವನಕ್ಕೆ ಪಾದ್ಯವನ್ನಿತ್ತು ವಿಶೇಷ ಪೂಜೆ ಸಲ್ಲಿಸಿದರು.