ದೊಡ್ಡಣ್ಣ ಗುಡ್ಡೆ : ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲ ನಿರಂತರ ಹತ್ತು ದಿನಗಳ ಕಾಲ ನೆರವೇರಲಿರುವ ನವರಾತ್ರಿ ಮಹೋತ್ಸವಕ್ಕೆ ಕದಿರು ಕಟ್ಟುವಿಕೆಯೊಂದಿಗೆ ಚಾಲನೆ ನೀಡಲಾಯಿತು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಆದ್ಯ ಗಣಪತಿಯಾಗ ಜೋಡಿ ಚಂಡಿಕಾಯಾಗ ಕಲ್ಪೋಕ್ತ ಪೂಜಾ ಸಹಿತ ರಂಗ ಪೂಜೆ ದುರ್ಗಾ ನಮಸ್ಕಾರ ಪೂಜೆ ರಾತ್ರಿಯ ಮಹಾಪೂಜೆಗಳು ನೆರವೇರಿದವು. ವಿವೇಕ್ ನಳಿನಿ ರಾವ್ ಹಾಗೂ ಆದಿತ್ಯ ಮುಕುಂದ ರಾವ್ ಅವರ ಪ್ರಯುಕ್ತ ಚಂಡಿಕಾಯಾಗ ರಾಧಾ […]

ದೊಡ್ಡಣ್ಣಗುಡ್ಡೆ: ದುರ್ಗಾ ಆದಿ ಶಕ್ತಿ ಕ್ಷೇತ್ರದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಸಂಪನ್ನ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.3 ರಿಂದ 6 ರವರೆಗೆ ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಶ್ರೀ ಕಾಲಭೈರವ ಬಿಂಬ ಪ್ರತಿಷ್ಠಾಪನೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಮಹಾಚಂಡಿಕಾಯಾಗ, ನಿರಂತರ ಮಹಾ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯುಕ್ತ ಗುರುವಾರದಂದು ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜರುಗಿತು. ಇಂದು ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ […]

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆ ಶುಕ್ರವಾರದ ಅಲಂಕಾರದಲ್ಲಿ ದುರ್ಗಾ ಆದಿಶಕ್ತಿ ದೇವಿ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿ ಅಲಂಕಾರ ನಾಗನ ಸನ್ನಿಧಿಯಲ್ಲಿ ನಡೆದ ಆಶ್ಲೇಷ ಬಲಿ ಶ್ರೀ ಮಠಾಧೀಶರ ಪರ್ಯಾಯದಲ್ಲಿ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞಕ್ಕೆ ಚಾಲನೆ ನೀಡಲಾಯಿತು. ಆಟಿಡೊಂಜಿ ದಿನದ ಖಾದ್ಯಗಳು