ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ದೇವಿಗೆ ಸ್ವರ್ಣ ಮಲ್ಲಿಗೆ ಹಾರ ಸಮರ್ಪಣೆ
ಮಂಗಳೂರು: ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಡಿ.18 ಭಾನುವಾರದಂದು ಸಂಜೆ 5 ಗಂಟೆಗೆ ಸಮಾಜದ ಭಕ್ತಿಯ ಕಾಣಿಕೆಯಾಗಿ ಶ್ರೀ ದೇವಿಗೆ ಚಿನ್ನದ ಮಲ್ಲಿಗೆ ಹಾರ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಸೇವೆಯನ್ನು ಸಮರ್ಪಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರು ಸ್ವರ್ಣ ಹಾರವನ್ನು ಚೆಂಡೆ ವಾದ್ಯ ಕಲಶಗಳ ಸಹಿತ ಮರೆವಣಿಗೆಯ ಮೂಲಕ ಶ್ರೀದೇವಿಗೆ ಸಮರ್ಪಿಸಿದರು. ಈ ಸ್ವರ್ಣ ಮಲ್ಲಿಗೆ ಹಾರವನ್ನು ಮಂಗಳೂರಿನ ಪ್ರಖ್ಯಾತ ಜ್ಯುವೆಲ್ಲರಿ ಸಂಸ್ಥೆಯಾದ ಭೀಮಾ ಜ್ಯುವೆಲರ್ಸ್ ನವರು ತಯಾರಿಸಿದ್ದು, […]