ಕುಂಬಳೆ: ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮರಿ ಮೊಸಳೆ ಪ್ರತ್ಯಕ್ಷ ಹಿನ್ನೆಲೆ ನ.17 ರಂದು ಮಕರ ಸಂಭ್ರಮ

ಕುಂಬಳೆ: ಇಲ್ಲಿನ ಬಹು ಪ್ರಸಿದ್ದ ಅನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸರೋವರದಲ್ಲಿ ಮರಿ ಮೊಸಳೆ ಪ್ರತ್ಯಕ್ಷವಾಗಿದ್ದು, ಈ ಪ್ರಯುಕ್ತ ನ.17 ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದ ಸಭಾಂಗಣದಲ್ಲಿ ಮಕರ ಸಂಭ್ರಮ ಕಾರ್ಯಕ್ರಮ ಜರಗಲಿದೆ. ಬಳಿಕ ಭಕ್ತರ ಜೊತೆ ಸಮಾಲೋಚನೆ ನಡೆಯಲಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ರಾಮನಾಥ್ ಶೆಟ್ಟಿ ತಿಳಿಸಿರುವುದಾಗಿ ಮಾಧ್ಯಮ ವರದಿಯಾಗಿದೆ. ಈ ಹಿಂದೆ ಬಬಿಯಾ ಮೊಸಳೆ ಇಲ್ಲಿನ ಆಕರ್ಷಣೆಯ ಕೇಂದ್ರವಾಗಿದ್ದು, ವರುಷದ ಹಿಂದೆ ಮೊಸಳೆಯು ದೈವಾಧೀನವಾಗಿತ್ತು. ಆದರೆ ಇದೀಗ ಮರಿ ಮೊಸಳೆಯೊಂದು […]