ಕಾರ್ಕಳ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶ್ರೇಯಾ ಪೂಜಾರಿ ನಿಧನ

ಕಾರ್ಕಳ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ಈದು ಗ್ರಾಮದ ಶ್ರೇಯಾ ಪೂಜಾರಿ (18) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದರು. ಶ್ರೇಯಾ ಈದು ಗ್ರಾಮದ ನಿವಾಸಿಗಳಾದ ಸಾಧು ಪೂಜಾರಿ ಮತ್ತು ಸುಮ ದಂಪತಿಯ ಪುತ್ರಿ. ಇವರು ಕಳೆದ 6 ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಕ್ಯಾನ್ಸರ್ ತಗುಲಿದ ಪ್ರಾಥಮಿಕ ಹಂತದಲ್ಲಿ ಸರ್ಜರಿ ‌ನಡೆಸಲಾಗಿತ್ತು. ಆದರೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.