ಬ್ರಹ್ಮಾವರ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆ ಉದ್ಘಾಟನೆ
ಬ್ರಹ್ಮಾವರ: ಕುಕ್ಕೆಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಶಾಖೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 4 ಭಾನುವಾರದಂದು ಬ್ರಹ್ಮಾವರ ಮುಖ್ಯರಸ್ತೆಯ ಮಧುವನ್ ಕಾಂಪ್ಲೆಕ್ಸ್ ನಲ್ಲಿ ಜರುಗಿತು. ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, 21 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಸ್ಥೆ ಇಂದು ಪ್ರೌಢಾವಸ್ಥೆಗೆ ತಲುಪಿದ್ದು, ಸಂಸ್ಥೆಯ ಬೆಳವಣಿಗೆಗೆ ಅಭಿನಂದನೆ. ಸಂಸ್ಥೆಯು ಕೇವಲ ಲಾಭ ಗಳಿಕೆಯ ಉದ್ದೇಶ ಮಾತ್ರದಿಂದಲ್ಲದೆ ಸಮಾಜ ಸೇವೆಯ ವಿವಿಧ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ಸಂಸ್ಥೆಯಲ್ಲಿ ಪ್ರಾಮಾಣಿಕ […]
ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಿಶಂತಿ ಸಂಭ್ರಮ: ಅ. 31ಕ್ಕೆ “ಯಕ್ಷಲೋಕ ವಿಜಯ” ಯಕ್ಷಗಾನ ಬಯಲಾಟ
ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ) ಪರ್ಕಳ ಇದರ ವಿಶಂತಿ ಸಂಭ್ರಮದ ಅಂಗವಾಗಿ ಇದೇ ಅಕ್ಟೋಬರ್ 31ರಂದು “ಯಕ್ಷಲೋಕ ವಿಜಯ” ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 1.30ಕ್ಕೆ ಮಣಿಪಾಲ ನರಸಿಂಗೆಯ ನರಸಿಂಹ ಸಭಾಭವನದಲ್ಲಿ “ಯಕ್ಷಲೋಕ ವಿಜಯ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಹಿಲ್ಲೂರು ಮೂಡುಬೆಳ್ಳೆ, ಮದ್ದಳೆಯಾಗಿ ಪರಮೇಶ್ವರ ಭಂಡಾರಿ, ಚಂಡೆ ಗಣೇಶ ಗಾಂವ್ಕರ್ ಹಾಗೂ ಮುಮ್ಮೇಳದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಹೆನ್ನೆಬೈಲು ಉಪ್ಪೂರು, ಮಾರುತಿ ಬೈಲಗದ್ದೆ, ಹಾಸ್ಯ ಪಾತ್ರಧಾರಿಯಾಗಿ ಸಿದ್ದಾಪುರ ಕಾಸರಕೋಡು, ಪುರುಷ ಪಾತ್ರಧಾರಿಯಾಗಿ ತೀರ್ಥಗಳ್ಳಿ, […]