ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೋಸಲೆ ವ್ಯಾಸರಾಜ ಮಠಾಧೀಶರ ಭೇಟಿ
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಇಂದು ಉಡುಪಿ ಶಿವಳ್ಳಿ ಗ್ರಾಮದ ಅತ್ಯಂತ ಪ್ರಾಚೀನ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇಗುಲದ ವರ್ಷಾವಧಿ ಉತ್ಸವದ ಹಿನ್ನೆಲೆಯಲ್ಲಿ ಆಗಮಿಸಿದ ಶ್ರೀಗಳು ಮಹಾಲಿಂಗೇಶ್ವರ ದೇವರಿಗೆ ಮಂಗಳಾರತಿ ಬೆಳಗಿದರು. ಬಳಿಕ ಶ್ರೀ ದೇವಳದ ವತಿಯಿಂದ ಅರ್ಪಿಸಲಾದ ಗುರುಪೂಜೆಯನ್ನು ಸ್ವೀಕರಿಸಿ ಶುಭಾನುಗ್ರಹ ಸಂದೇಶ ನೀಡಿ ಹರಸಿದರು. ದೇವಳದ ವತಿಯಿಂದ ಶ್ರೀಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಆಡಳಿತ […]