ಮತದಾನ ಜಾಗೃತಿ ಕುರಿತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಿರುಚಿತ್ರ ನಿರ್ಮಾಣ ಸ್ಪರ್ಧೆ
ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿಯ ಕುರಿತ ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಿರುಚಿತ್ರದ ಅವಧಿಯು 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗಿರಬೇಕು. ವಿಷಯವು ಮತದಾರರಿಗೆ ತಮ್ಮ ಮತದ ಬಗ್ಗೆ ಹಾಗೂ ಮತದಾನ ಮಾಡಲು ಅರಿವು ಮೂಡಿಸುವಂತಿರಬೇಕು. ವೀಡಿಯೋ ಹಾಗೂ ಧ್ವನಿ ಉತ್ತಮವಾಗಿರಬೇಕು ಹಾಗೂ ವಿಷಯಕ್ಕೆ ತಕ್ಕಂತೆ ವೇಷಭೂಷಣವಿರಬೇಕು. ಕಿರುಚಿತ್ರವು ರಾಜಕೀಯ ವ್ಯಕ್ತಿ, ಪಕ್ಷ, ಚಿಹ್ನೆ, ಅಭ್ಯರ್ಥಿಯ ಕುರಿತು ವಿಷಯ ಹಾಗೂ ದೃಶ್ಯವನ್ನು ಒಳಗೊಂಡಿರಬಾರದು. ಯಾವುದೇ […]