ಕೇಂದ್ರ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಉಡುಪಿ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವರು. ಏ. 22 ರಂದು ರಾತ್ರಿ ಉಡುಪಿಗೆ ಆಗಮಿಸಿ, ವಾಸ್ತವ್ಯ ಮಾಡಲಿದ್ದು, ಏಪ್ರಿಲ್ 23 ರಂದು ಬೆಳಗ್ಗೆ 9.30 ಕ್ಕೆ ಉಡುಪಿ ಹಾಗೂ 11.30 ಕ್ಕೆ ಕುಂದಾಪುರದಲ್ಲಿ ಆರೋಗ್ಯ ಮೇಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ನಂತರ ಮಂಗಳೂರಿಗೆ ತೆರಳಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.