ಫೋನ್ ಕದ್ದಾಲಿಕೆ ಯಾರು ಮಾಡಿದರೂ ಅದು ತಪ್ಪು: ಶೋಭಾ ಕರಂದ್ಲಾಜೆ
ಉಡುಪಿ: ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅದರ ಸತ್ಯಾಂಶ ಹೊರಬರಬೇಕು. ಅದು ಯಾರು ಮಾಡಿದರೂ ತಪ್ಪು. ಆದರೆ ಯಾರೂ ತಪ್ಪು ಮಾಡದಿದ್ದರೆ ಅಪರಾಧಿ ಭಾವನೆ ಹೊಂದುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಏನೂ ತಪ್ಪು ಮಾಡದಿದ್ದರೆ ಅವರು ಭಯಪಡುವ ಅಗತ್ಯವಿಲ್ಲ. ಅವರು ಖುಷಿಯಾಗಿ ಇರಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ ಅಪೇಕ್ಷೆ ಇತ್ತು. ಅದರಂತೆ […]