ಹಾರಾಡಿ: ಮಾ.8 ರಿಂದ 12 ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾರಾಡಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವವು ಮಾ.8 ರಿಂದ 12 ರವರೆಗೆ ನಡೆಯಲಿದ್ದು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 8 ರಂದು ಬೆಳಿಗ್ಗೆ ಧ್ವಜಾರೋಹಣ ಮತ್ತು ರಾತ್ರಿ ಶಿವರಾತ್ರಿಯ ಮಹಾರಂಗಪೂಜೆ ನಡೆಯಲಿದೆ. ಮಾ.9 ರಂದು ಬೆಳಿಗ್ಗೆ ದೇವತಾ ಕಾರ್ಯಕ್ರಮ ರಾತ್ರಿ ರಂಗಪೂಜೆ ನಡೆಯಲಿದೆ. ಮಾ.10 ರಂದು ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಮನ್ಮಹಾರಥೋತ್ಸವ ಜರುಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ರಥೋತ್ಸವ ನಿಮಿತ್ತ ಭಜನಾ ಕಾರ್ಯಕ್ರಮಗಳು, […]

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 8ರ ಶುಕ್ರವಾರ ಮಹಾಶಿವರಾತ್ರಿ ಮಹೋತ್ಸವವನ್ನು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಗುವುದು. ಬೆಳಗ್ಗೆ 6.30 ರಿಂದ ರಾತ್ರಿ 10 ರ ವರೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಮತ್ತು ಬಿಲ್ವಾರ್ಚನೆ ಸಹಿತ ಸರ್ವಸೇವೆಗಳು ನಡೆಯಲಿವೆ. ಬೆಳಿಗ್ಗೆ 5 ರಿಂದ 7ರವರೆಗೆ ಯೋಗ – ಶಿವ ನಮಸ್ಕಾರ, 7 ರಿಂದ 8 ರವರೆಗೆ ಏಕಾದಶ ರುದ್ರಾಭಿಷೇಕ, ಸಂಜೆ 5 ರಿಂದ 9 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ […]

ಶಿವನನ್ನು ಅರಿತು ಶಿವರಾತ್ರಿ ಆಚರಿಸಿ: ರಾಜಯೋಗಿನಿ ಬಿ.ಕೆ ವಸಂತಿ

ಕಾರ್ಕಳ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಇದರ ಸೇವಾಕೇಂದ್ರದಲ್ಲಿ ಮಾಚ್ 19 ರಂದು ಮಹಾಶಿವರಾತ್ರಿಯ ಪ್ರಯುಕ್ತ ಹೈಸ್ಕೂಲ್ ಮಕ್ಕಳಿಗೆ ಶಿವ ಭಕ್ತಿಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಳೆದ 38 ವರ್ಷಗಳಿಂದ ಈಶ್ವರೀಯ ಸೇವೆಯಲ್ಲಿ ತೊಡಗಿಕೊಂಡಿರುವ ಬ್ರಹ್ಮಕುಮಾರಿ ಬಿ.ಕೆ. ವಸಂತಿ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ, ಶಿವನನ್ನು ಅರಿತು ಶಿವರಾತ್ರಿ ಆಚರಿಸುವಂತೆ ಕರೆ ನೀಡಿದರು. ಪರಮಾತ್ಮನು ಈ ಧರೆಗೆ ಬಂದು ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಮನುಷ್ಯರಿಗೆ ಸತ್ಯ ಜ್ಞಾನವನ್ನು ತಿಳಿಸಿ ಮಾನವರಿಂದ ದೇವ […]

ಇಂದಿನಿಂದ ಫೆ. 24 ರವರೆಗೆ ಉಡುಪಿ ಶ್ರೀ ಅನಂತೇಶ್ವರ ದೇಗುಲದಲ್ಲಿ ಶಿವರಾತ್ರಿ ಉತ್ಸವ

ಉಡುಪಿ: ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.17 ರಿಂದ 24ರವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಜರಗಲಿದೆ. ಫೆ.17ರ ರಾತ್ರಿ ಬಲಿ, ಅಂಕುರಾರೋಹಣ, ಫೆ. 18ರ ಮಹಾಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾ ರಂಗಪೂಜೆ, ಫೆ. 19 ರಿಂದ ಫೆ.21ರ ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಫೆ.22 ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾ ರಥೋತ್ಸವ ನಡೆಯಲಿದೆ. ಫೆ.23 ರಂದು ಕವಾಟೋದ್ಘಾಟನೆ, ಮಹಾಮಂತ್ರಾಕ್ಷತೆ, ಫೆ.24 ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. […]