‘ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್​ ಪಾರ್ಕ್ ಡಿಸಿಎಂ ಡಿಕೆಶಿ, ನಟ ಶಿವ ರಾಜ್​ಕುಮಾರ್​​ ಅವರಿಂದ ಉದ್ಘಾಟನೆ

ಇದೀಗ ಈ ಇನ್ನೋವೇಟಿವ್​ ಫಿಲ್ಮ್​ ಸಿಟಿ ಸಂಪೂರ್ಣವಾಗಿ ಬದಲಾವಣೆ ಆಗುವ ಮೂಲಕ ಹೊಸ ರೂಪದಲ್ಲಿ ಜಾಲಿವುಡ್​ ಆಗಿ ಬದಲಾಗಿದೆ. ಈ ಪಾರ್ಕ್​ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್​ ರೈಡ್​ಗಳಲ್ಲದೇ, ಡೈನೋ ಪಾರ್ಕ್​, 5 ರೆಸ್ಟೋರೆಂಟ್​ಗಳು, 2 ರೆಸ್ಟ್ರೋ ಪಬ್​ಗಳು..ಹೀಗೆ ಮನೆ ಮಂದಿಯೆಲ್ಲಾ ಜೊತೆಯಾಗಿ ಒಟ್ಟಿಗೆ ಕಾಲ ಕಳೆಯಲು ಸೂಕ್ತವಾದ ಸುಂದರ ತಾಣವಾಗಿದೆ. ಇನ್ನೋವೇಟಿವ್​ ಫಿಲ್ಮ್​ ಸಿಟಿ ಅಂದಾಕ್ಷಣ ನೆನಪಾಗುವುದು ವೀಕೆಂಡ್​ನಲ್ಲಿ ಫ್ಯಾಮಿಲಿ ಸಮೇತ ಅಡ್ವೆಂಚರ್ಸ್​, ಮಕ್ಕಳಿಗೆ ಮನರಂಜನೆ ಸಿಗುವ ಎಂಟರ್​ಟೈನ್​ಮೆಂಟ್​ ತಾಣ.’ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್​ […]