ಶಿರ್ವ: ಬೈಕ್ ಗಳ ನಡುವೆ ಭೀಕರ ಅಪಘಾತ; ಮಹಿಳೆ ಮೃತ್ಯು

ಶಿರ್ವ: ಎರಡು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ‌ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಭಾಷ್ ನಗರದ ಕುರ್ಕಾಲು ಜಂಕ್ಷನ್ ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಹೇರೂರು ಗ್ರಾಮದ ನಿವಾಸಿ ಶರ್ಮಿಳಾ (42) ಎಂದು ಗುರುತಿಸಲಾಗಿದೆ. ಇವರು ಉಡುಪಿ ವಿದ್ಯೋದಯ ಶಾಲೆಯಲ್ಲಿ ಪರಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶರ್ಮಿಳಾ ಅವರು ಇಂದು ಬೆಳಿಗ್ಗೆ ತಮ್ಮ ಪತಿ ಸುರೇಶ್ ದೇವಾಡಿಗ ಅವರೊಂದಿಗೆ ಬೈಕ್ ನಲ್ಲಿ ಹೇರೂರಿನಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದರು. ಕುರ್ಕಾಲು ಜಂಕ್ಷನ್ ಬಳಿ ಈ ಅಪಘಾತ ನಡೆದಿದೆ. ಎದುರಿನಿಂದ ಬಂದ ಬೈಕ್ […]