ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಇನ್ನಿಲ್ಲ
ನವದೆಹಲಿ:ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (81) ಶನಿವಾರ ನಿಧನರಾಗಿದ್ದಾರೆ. ಶೀಲಾದೀಕ್ಷಿತ್ ಕಾಂಗ್ರೆಸ್ ಮುಖಂಡರಾಗಿ,1998-2013 ರ ವರೆಗೆ ದೆಹಲಿಯ ಮುಖ್ಯ ಮಂತ್ರಿಯಾಗಿ ಜನಪ್ರಿಯರಾಗಿದ್ದರು. ತಮ್ಮ 81 ನೇ ವಯಸ್ಸಿನಲ್ಲಿ ದೆಹಲಿ ಈಶಾನ್ಯ ಕ್ಷೇತ್ರದಂದ ಸ್ಪರ್ಧಿಸಿದ್ದ ಇವರು ತಮ್ಮ ವಿಶೇಷ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು.