ಶೃಂಗೇರಿ ಹುಡುಗಿ ಶಾಶ್ವತಿ ಹೆಚ್ ಎಸ್ ಬಿಡಿಸಿದ ರಂಗು ರಂಗಿನ ಚಿತ್ರಗಳು

ಶಾಶ್ವತಿ ಹೆಚ್.ಎಸ್, ಮಲೆನಾಡಿನ ಚೆಂದದ ಊರಾದ ಶೃಂಗೇರಿಯ ಹುಡುಗಿ. ಇವರಿಗೆ ಚಿತ್ರ ಬಿಡಿಸುವುದೆಂದರೆ ನೆಚ್ಚಿನ ಹವ್ಯಾಸ. ಇವರು ಬಿಡಿಸಿದ ಚಿತ್ರಗಳಲ್ಲಿ ನಿಸರ್ಗದ ಸಹಜ, ಸರಳ ಮಾಧುರ್ಯವಿದೆ. ಆಡಂಬರವಿಲ್ಲದೆ ಅತ್ಯಂತ ಸಹಜತೆಯಿಂದ ಕಂಗೊಳಿಸುವ ಶಾಶ್ವತಿ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಕಲಾರಸಿಕರ ಗಮನ ಸೆಳೆಯುವಂತಿದೆ. ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಶಾಶ್ವತಿ ಅವರಿಗೆ ಚಿತ್ರಕಲೆಯ ಜೊತೆಗೆ ಸಂಗೀತ,ಗಾರ್ಡನಿಂಗ್ ಮತ್ತು ಫೋಟೋಗ್ರಫಿ ಖುಷಿ ಕೊಡುವ ಹವ್ಯಾಸಗಳು.ಇವರ ಕೈಯಲ್ಲರಳಿದ ಕೆಲವು ಚಿತ್ರಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ.