ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಾಯಾಘಾತದಿಂದ ನಿಧನ

ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಗುರವಾರ ಮುಂಜಾನೆ ಉಡುಪಿಯ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೃದಯಾಘಾತ ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಹೆಮ್ಮಣ್ಣ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ ಹೆಮ್ಮಣ್ಣ, […]