ಕಿನ್ನಿಮೂಲ್ಕಿ: 8ನೇ ವರ್ಷದ ಶಾರದಾ ಮಾತೆ ಪ್ರತಿಷ್ಠಾಪನೆ

ಕಿನ್ನಿಮೂಲ್ಕಿ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಿನ್ನಿಮೂಲ್ಕಿ -ಕನ್ನರ್ಪಾಡಿಯ ಸ್ವಾಗತ ಗೋಪುರ ಬಳಿಯ ಮೈದಾನದಲ್ಲಿ 8ನೇ ವರ್ಷದ ಶಾರದಾಮಾತೆ ಪ್ರತಿಷ್ಠಾಪನೆ ಜರುಗಿತು. ನ. 23 ವರೆಗೆ ಶಾರದಾ ಮಹೋತ್ಸವ ನಡೆಯಲಿದ್ದು, ಶ್ರೀ ದೇವಿಯ ಸನ್ನಿಧಿಯಲ್ಲಿ ಚಂಡಿಕಾಯಾಗ ಜರಗಿತು. ಅರ್ಚಕ ಸುಬ್ರಮಣ್ಯ ಐತಾಳ ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು. ಸಮಿತಿ ಅಧ್ಯಕ್ಷ ಉದಯಕುಮಾರ್, ಜಯಪ್ರಕಾಶ್ ಕೆದ್ಲಾಯ, ದೇವದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ 7ನೇ ವರ್ಷದ ಶಾರದಾ ಪೂಜೆ

ಉಡುಪಿ: ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ, ಉಡುಪಿ ದಸರಾ ಇದರ 7ನೇ ವರ್ಷದ ಶಾರದಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆ ಪೂಜೆಯು ಸಮಿತಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಆದಿತ್ಯವಾರದಂದು ಶ್ರೀ ಕೃಷ್ಣ ಮಠದ ಹೊರಾವರಣದಲ್ಲಿ ನಡೆಯಿತು. ಶ್ರೀ ದೇವಿಯ ಸನ್ನಿದಿಯಲ್ಲಿ ಗಣಹೋಮ, ದುರ್ಗಾ ಹೋಮ ನಡೆಯಿತು. ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.