ತೆಂಕಪೇಟೆ ಶಾರದಾ ವಿಸರ್ಜನೆ, ಕೊಂಕಣಿ ಯಕ್ಷಗಾನ ಪ್ರದರ್ಶನ

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಾರದಾ ದೇವಿಗೆ ದೇವಳದ ಅರ್ಚಕ ದಯಾಘನ್ ಭಟ್ ಮಹಾ ಮಂಗಳಾರತಿ ಬೆಳಗಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಗುರುವಾರದಂದು ಸಂಜೆ ಶ್ರೀ ಶಾರದಾ ದೇವಿಯ ಉತ್ಸವವು ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಯ ಸಮಯ ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು. […]

ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಪ್ರತಿಷ್ಠೆ

ಉಡುಪಿ: ಇಲ್ಲಿನ ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶಾರದಾ ದೇವಿಯ ಪ್ರತಿಷ್ಠೆ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ದೇವಳದ ಅರ್ಚಕರುಗಳಾದ ದಯಾಘನ್ ಭಟ್, ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿ ಶಾರದಾ ದೇವಿಗೆ ಮಹಾ ಮಂಗಳಾರತಿ ಬೆಳಗಿಸಿದರು. ಈ ಹಿನ್ನೆಲೆಯಲ್ಲಿ ಉಡುಪಿ ನಗರವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್ , ಗಣೇಶ್ ಕಿಣಿ, ಅಶೋಕ ಬಾಳಿಗಾ , ನರಹರಿ ಪೈ, […]