ಶಾಲಾ ಕ್ರೀಡೋತ್ಸವದಲ್ಲಿ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನಮಾಜ್ ಪ್ರಕರಣ: ಪ್ರತಿಭಟನೆ ನಡೆಸಿದ ಹಿಂಜಾವೇ

ಕುಂದಾಪುರ: ಇಲ್ಲಿನ ಶಂಕರನಾರಾಯಣದಲ್ಲಿ ಮದರ್ ಥೆರೆಸಾ ಸಂಸ್ಥೆಯ ಶಾಲಾ ಕ್ರೀಡೋತ್ಸವ ಸಂದರ್ಭದಲ್ಲಿ ಸ್ವಾಗತ ನೃತ್ಯಕ್ಕೆ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನಮಾಜ್ ಮಾಡಿಸಿದ ಪ್ರಕರಣ ಸಾಮಾಜಿಕ ಸಾಮಾಜಿಕ ಜಾಲತಾಣಗಳ ಮೂಲಕ ಬೆಳೆಕಿಗೆ ಬಂದ ಬಳಿಕ, ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಹಿಂದೂ ಜಾಗರಣ ವೇದಿಕೆಯು ಶಾಲೆಯ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬುಧವಾರದಂದು ಪ್ರತಿಭಟನೆ ನಡೆಸಿದೆ.

ಶಂಕರನಾರಾಯಣ ಖಾಸಗಿ ಶಾಲೆಯ ಕ್ರೀಡೋತ್ಸವದಲ್ಲಿ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನಮಾಜ್: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ: ಶಂಕರನಾರಾಯಣದ ಖಾಸಗಿ ಶಾಲೆಯೊಂದು ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಆಯೋಜಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಪ್ರದರ್ಶಿಸಿದ್ದರು. ಕ್ರೀಡೋತ್ಸವ ಪ್ರಾರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸುಮಾರು 30 ಸೆಕೆಂಡ್ ಗಳ ಕಾಲ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿಗಳ ಬಳಿ ನಮಾಜ್ ಮಾಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಹಿಂದೂ ವಿದ್ಯಾರ್ಥಿಗಳ ಮೇಲೆ ಒತ್ತಾಯ ಪೂರ್ವಕವಾಗಿ ಇಸ್ಲಾಂ ಆಚರಣೆಗಳನ್ನು ಹೇರಿಕೆ ಮಾಡಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ಶಂಕರನಾರಾಯಣ […]