ಬಗೆಹರಿದ ತುಳು ಚಿತ್ರ ಬಿಡುಗಡೆ ಗೊಂದಲ: ಡಿ. 16ಕ್ಕೆ ಶಕಲಕ ಬೂಮ್ ಬೂಮ್, ಜನವರಿ 13 ಕ್ಕೆ ಇಲ್ಲ್ ಒಕ್ಕೆಲ್ ತೆರೆಗೆ
ಮಂಗಳೂರು: ತುಳು ಚಲನಚಿತ್ರಗಳಾದ ಶಕಲಕ ಬೂಮ್ ಬೂಮ್ ಹಾಗೂ ಇಲ್ಲ್ ಒಕ್ಕೆಲ್ ಬಿಡುಗಡೆ ದಿನಾಂಕದ ಬಗ್ಗೆ ಇದ್ದ ಗೊಂದಲ ಬಗೆಹರಿದಿದ್ದು, ಶಕಲಕ ಬೂಮ್ ಬೂಮ್ ಡಿ. 16 ರಂದು, ಇಲ್ಲ್ ಒಕ್ಕೆಲ್ ಜ. 13ಕ್ಕೆ ತೆರೆಗೆ ಬರಲಿದೆ. ಈ ಬಗ್ಗೆ ಎರಡೂ ಚಿತ್ರತಂಡಗಳು ಮಾತುಕತೆ ನಡೆಸಿದ್ದು, ಗುರುವಾರ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಪ್ರಮುಖರು ಮಾಹಿತಿ ನೀಡಿದರು. ಡಾ. ಸುರೇಶ್ ಚಿತ್ರಾಪು ನಿರ್ದೇಶನದ ‘ಇಲ್ಲ್ ಒಕ್ಕೆಲ್’ತುಳು ಸಿನಿಮಾ ಅ. 21ಕ್ಕೆ ಬಿಡುಗಡೆಗೆ ದಿನ ನಿಗದಿಯಾಗಿದ್ದರೂ, ಟಾಕೀಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಡಿ. […]
ತುಳುನಾಡಿನ ಮೊದಲ ತುಳು ಹಾರರ್ ಚಲನಚಿತ್ರ ಶಕಲಕ ಬೂಂ ಬೂಂ ಡಿಸೆಂಬರ್ 16 ರಂದು ಬಿಡುಗಡೆ
ಉಡುಪಿ: ಬಹುನಿರೀಕ್ಷಿತ ಶಕಲಕ ಬೂಂ ಬೂಂ ಹಾರರ್ ಚಿತ್ರದ ಪೋಸ್ಟರ್ ಅನ್ನು ಸೆ. 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಇಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ರಮೇಶ್ ಸಲ್ವಾನ್ಕಾರ್ ಬಿಡುಗಡೆ ಗೊಳಿಸಿದರು. ಚಲನಚಿತ್ರವು ಡಿಸೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿದ್ದ ದೇವಳದ ಅಧ್ಯಕ್ಷ ಎಸ್ ಗೋಪಾಲಕೃಷ್ಣ ನಾಯಕ್, ಆನಂದ ನಾಯಕ್ ಆರ್ಬಿ, ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೋಡಂಗೆ, ಡಾ. […]
ತುಳು ಚಿತ್ರ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ತುಳು ಚಿತ್ರ ಶಕಲಕ ಬೂಮ್ ಬೂಮ್ ಬಿಡುಗಡೆ ದಿನಾಂಕ ಘೋಷಣೆ
ಉಡುಪಿ: ಸೆಪ್ಟೆಂಬರ್ 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆಯಲ್ಲಿ ತುಳು ಚಿತ್ರ ಶಕಲಕ ಬೂಮ್ ಬೂಮ್ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಘೋಷಿಸಲಿರುವುದು. ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ ಸಲ್ವಾನ್ಕಾರ್ ಅಲೆವೂರು, ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಣಿಬೆಟ್ಟು, ನಿರ್ದೇಶಕ ಶ್ರೀಶ ಎಳ್ಳಾರೆ , ಚಿತ್ರದ ನಾಯಕ ಗೂಡ್ವಿನ್ ಸ್ಪರ್ಕಲ್ ಹಾಗೂ ಚಿತ್ರ ತಂಡ ಭಾಗವಹಿಸಲಿರುವುದು ಎಂದು ನಿರ್ಮಾಪಕ ನಿತ್ಯಾನಂದ ನರಸಿಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ